ಮೈಸೂರಿನಲ್ಲಿ ತಾಯಿಯ ಬಹು ದಿನಗಳ ಆಸೆ ತೀರಿಸಿದ ಮಗ | Oneindia Kannada

2018-08-29 983

His name is D. Krishnakumar. Working in a private company. He took a Father scooter to fulfill his mother long-term desire and made a visit to the holy places



ಇದು 21 ನೇ ಶತಮಾನ. ಅನೇಕ ಮಕ್ಕಳು ತಂದೆ -ತಾಯಿಯನ್ನು ನೋಡಿಕೊಳ್ಳುವುದಿರಲಿ ಫೋನ್ ಮಾಡಿ ಹೇಗಿದ್ದೀರಿ? ಎಂದು ಕೇಳುವ ಸೌಜನ್ಯವೂ ಇಲ್ಲದವರು. ಪೋಷಕರ ಆರೋಗ್ಯದಲ್ಲಿ ಏರು -ಪೇರಾದರಂತೂ ಕೇಳಲೇಬೇಡಿ. ವೃದ್ಧಾಶ್ರಮಕ್ಕೋ, ಆಸ್ಪತ್ರೆಗೊ ಸೇರಿಸಿ ಕೈತೊಳೆದುಕೊಳ್ಳುತ್ತಾರೆ. ತನ್ನ ತಾಯಿಯ ಬಹು ದಿನಗಳ ಹಂಬಲವನ್ನು ಈಡೇರಿಸಲು ಮಗನೊಬ್ಬ 20 ವರುಷದ ತಂದೆಯ ಸ್ಕೂಟರ್ ಏರಿ ಬರೋಬ್ಬರಿ 29 ಸಾವಿರ ಕಿ.ಮೀ. ಕ್ರಮಿಸಿ ದೇವಸ್ಥಾನಗಳ ದರ್ಶನ ಮಾಡಿಸಿದ್ದಾನೆ.